Saturday, 28 January 2012

ಕನ್ನಡ ಬ್ಲಾಗಿನ ಕವಿಗಳ ಕಾವ್ಯಗೊಂಚಲು

ಕನ್ನಡ ಬ್ಲಾಗಿನಲ್ಲಿ ಬರೆಯುವ ಗೆಳೆಯರೇ, 
ವಾರಕ್ಕೊಮ್ಮೆ ನೀವು ಪ್ರಕಟಿಸುವ ನಿಮ್ಮ ಕವಿತೆಗಳು ಒಂದು ಕಡತದ ರೂಪದಲ್ಲಿ  (ಬ್ಲಾಗ್) ಸಂಗ್ರಹಿಸುವ ಸದುದ್ದೇಶದಿಂದ  ಈ ಪ್ರಯತ್ನ.
------------------------------------------------------------------------------------------------------------
ಈಶ್ವರ ಕಿರಣ್ ಭಟ್
ನನ್ನವಳು ಕೈಹಿಡಿದ ಮಲ್ಲಿಗೆ ಬಳ್ಳಿ, ಹೆರಳೋ
ಕಾನನದ ಕತ್ತಲಿನಂತೆ, ಹುಬ್ಬೆರಡು ಸೋನೆ
ಚಿನ್ನದ ಮಳೆಗೆ ಮೂಡಿದ ಕಾಮನಬಿಲ್ಲು !
ಮುನ್ನಿನಾ ಮಾತುಗಳೆ ಕೋಗಿಲೆಯ ಕುಕಿಲು !
*********************************************************************************
 
ಮಂಜುನಾಥ ಮರವಂತೆ
** ಸನ್+ಸಾರ=ಸಂಸಾರ **
ಬೆಳಕಿನ ಕಿಂಡಿಯಿಂದ ಒಳಬರುವ ಕತ್ತಲು
ಕೋಣೆಯ ಒಳಗೆಲ್ಲ ಬೆತ್ತಲೊ ಬೆತ್ತಲು
ಕೂಡಿದ ತುಟಿಯೊಡನೆ ಮುಚ್ಚಿದಾ ಕಣ್ಣು
ಬೆವರಿನ ಗಂಧವೊಂದೆ ಬಾಕಿಯಲ್ಲ ಮಣ್ಣು
ಮಾಡಿನ ಸಂದಿಯಿಂದ ಒಳಬಂದ ಬೆಕ್ಕು
ಮಾಡಿತು ಶಬುದವನು ಅಡಿಗೆಮನೆ ಹೊಕ್ಕು
ಶ್! ಎಂದು ಕೂಗಿದೆ ನಾ ಮಲಗಿದಲ್ಲೆ
ಅಯ್ಯೋ, ಆರುವರುಷದ ಮಗನು ಎದ್ದನಲ್ಲೆ
ಎಂಟಕೆ ಮಲಗಿಸಿದ್ದೆನವನ ಕತೆಯ ಹೇಳಿ
ಆದರೂ ರದ್ದಾಯಿತು ನಮ್ಮ ಪ್ರಣಯ ಕೇಳಿ.
**********************************************************************************
 ಪ್ರದೀಪ್ ಹೆಗಡೆ
ದಿನದ ಮುಸ್ಸಂಜೆ ಹೊತ್ತಲ್ಲಿ
ನನ್ನ ಒಬ್ಬಂಟಿ ಮನಸಲಿ,
ನೂರಾರು ಯೋಚನೆಗಳ ನಡುವೆ,
ಒಂದಷ್ಟು ಪದಗಳು ಸೇರಿ,
ಒಂದು ಕವಿತೆಯಾಗಲು ಹೊರತಿದೆ..

ಭಾವದ ಮಂಟಪ ಕಟ್ಟಿ,
ಪ್ರಾಸದ ತೋರಣವ ಅಲಂಕರಿಸಿ,
ಅಕ್ಷರದ ಹೂ ಮಾಲೆ ಪೋಣಿಸಿ,
ನನ್ನ ಮನದ ಕಲ್ಪನೆಯೇ,
ಒಂದು ಕವಿತೆಯಾಗುತ್ತಿದೆ..

ಕಸ್ತೂರಿ ಕನ್ನಡದ ಸುಗಂಧದಲ್ಲಿ,
ಕವಿರತ್ನರ ಆಶಿರ್ವಾದದೊಂದಿಗೆ,
ಶಿಲೆಯನ್ನೂ ಸಾಹಿತಿಯಗಿಸೋ ಏಕಾಂತದೊಳು,
ಈ ಎಲ್ಲಾ ಪದಪುಂಜವು ಸೇರಿ
ಒಂದು ಕವಿತೆಯಾಗಿ ನಿಂತಿದೆ..
******************************************************************************** 
ಭಾಸ್ಕರ್ ಹೆಗಡೆ ಹೊನ್ನಾವರ
ನೀನು ದೂರ ಹೋದಾಗ
ಜೇನು ಕಚ್ಚಿ ಹಾರಿದಂತೆ
ನಿನು ಕನಸಲಿ ಬಂದಾಗ
ತುಂಟ ಲಜ್ಜೆ ಕೆಣಕುವಂತೆ
ನಿನ್ನ ನೆನಪುಗಳು ಕವಿದಾಗ
ತುಟಿಯ ಬಿಚ್ಚಿ ಹಾಡಿದಂತೆ
ನೀನು ಮೆಲ್ಲನೆ ನಡೆವಾಗ
ಕಾಲ ಹೆಜ್ಜೆ ಕುಣಿಯುವಂತೆ
ನೀನು ಮಾತನಾಡುವಾಗ
ವಸಂತದ ಕೋಗಿಲೆಂತೆ
ನೀನು ಓಡುವುದು ಕಂಡಾಗ
ಮಯೂರವು ನಾಚಿತಂತೆ
ನೀನು ನಗುತಿರುವಾಗ
ಮುಗಿಲುಕರಗಿ ಮಳೆಯಾಯಿತಂತೆ
ನೀ ಮುಂದೆ ಸಾಗುವಾಗ
ಹಿಂತೆ ಬರುವರು ಎಲ್ಲ ಹುಚ್ಚರಂತೆ
ಒಮ್ಮೆ ನೋಡೆಯಾ ತಿರುಗಿ
ಎಂಬುದೇ ನನ್ನ ಚಿಂತೆ
----------------------------------------------------------------------------
ಸೊಂಪಾದ ನಿನ್ನ ಹೆರಳು
ತಂಪಾನಿಲ ಬೀಸಲು
ಮೆಲ್ಲನತ್ತಿತ್ತ ಹಾರಿತು
ನನ್ನ ಮನವದನ್ನ ಕಂಡಿತು
ಆಗ ಅದು ಪ್ರೀತಿಯಲಿ ಬಿತ್ತು

ನಯನದಿ ಮಂದಹಾಸ ಬೀರುತ
ಕುಡಿಗಣ್ಣ ನೋಟದಲೆ ನನ್ನ ಕೊಲ್ಲುತ
ತಿರುಗದೆ ಎಲ್ಲಿ ಸಾಗುತಿರುವೆ ಓಡುತಾ

ಮನದಲಿ ನೆನೆದಾಗ ನೆನಪಿನ ಮಯೂರ
ನನಗೆ ನೀ ಸಿಗದಾದಾಗ ಬಾಳೇ ಕಠೋರ
ಏನೇ ಆದರು ನನ್ನ ಪ್ರೀತಿ ಎಂದೂ ಅಮರ
--------------------------------------------------------------------------------------- 
ಗುರುಪ್ರಸಾದ್ ಆಚಾರ್ಯ
 
ಅತ್ತ ಆಗಸದ ನೀಲ ವರ್ಣ, ಇತ್ತ ಭೂರಮೆಯ ಹಸಿರು ವರ್ಣ
ಈ ಬಣ್ಣಗಳ ನಡುವೆಯೇ ನಡೆಯ ತೊಡಗಿದೆಯೇ ಯುದ್ಧ.
ಆಗಸದ ಗೆಲುವಿಗಾಗಿ ಸಾಲು ಕಟ್ಟಿ ಮೋಡಗಳು ಆದವು ಸಿದ್ಧ
ಇಳೆಯ ಗೆಲುವಿಗಾಗಿ ತೊಡೆ ತಟ್ಟಿ ಬಾಳೆ ತೋಟವಾಗಿಹುದು ಸನ್ನದ್ಧ
 ***************************************************************************

No comments:

Post a Comment